== ಬುಧ್ಲಾಡಾ == ಬುಧ್ಲಾಡಾ, ಭಟಿಂಡಾ-ದೆಹಲಿ ರೈಲು ಮಾರ್ಗದಲ್ಲಿದೆ. ಮಾನಸ ಪಟ್ಟಣದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಬುಡಾ ಮತ್ತು ಲಾಡಾ ಎಂಬ ಇಬ್ಬರು ಖತ್ರಿ ಸಹೋದರರ ಹೆಸರನ್ನು ಈ ಹಳ್ಳಿಗೆ ಇಡಲಾಗಿದ್ದು ಬ್ರಿಟಿಷರು ವಶಪಡಿಸಿಕೊಳ್ಳುವ ಮೊದಲು ಕೈತಾಲ್ ರಾಜ್ಯದ ಒಂದು ಭಾಗವಾಗಿತ್ತು. ಇಲ್ಲಿಂದ 10 ಕಿ.ಮೀ. ದೂರದಲ್ಲಿರುವ ದೋದ್ರ ಎಂಬ ಸ್ಥಳದಲ್ಲಿ ಭ್ರಹ್ಮ್ ಬುಂಗಾ ಎಂಬ ಒಂದು ಗಮನಾರ್ಹ ಗುರುದ್ವಾರವಿದೆ. ಆಧ್ಯಾತ್ಮಿಕ ವರ್ಧನೆಯ ಸಲುವಾಗಿ ಜನರು ಹತ್ತಿರ ಮತ್ತು ದೂರದಿಂದ ಮೂರು ’ಸಮಾಗಮ’ಗಳನ್ನು ನಡೆಸುತ್ತಾರೆ. ಭಟಿಂಡಾ ಇಲ್ಲಿಗೆ ಸುಮಾರು 80 ಕಿ.ಮೀ. ದೂರದಲ್ಲಿದೆ. == ಸರ್ದುಲ್‍ಗಡ್ == ಸರ್ದುಲ್‍ಗಡ್ ಮಾನಸದಿಂದ ಸುಮಾರು 37 ಕಿ.ಮೀ. ದೂರದಲ್ಲಿರುವ ಒಂದು ಪ್ರಮುಖ ನಗರ. ಹಿಂದೆ ಇದನ್ನು ರೋರಿ ಧುಡಾಲ್ ಎಂದು ಕರೆಯುತ್ತಿದ್ದರು ಮತ್ತು ಪಾಟಿಯಾಲದ ರಾಜರ ರಾಜ್ಯದ ಭಾಗವಾಗಿತ್ತು. ಪಾಟಿಯಾಲದ ರಾಜಕುಮಾರನಾಗಿದ್ದ ಸರ್ದುಲ್ ಸಿಂಗ್ ಅವನಿಗೆ ಇದು ಒಂದು ಬೇಟೆಯ ಸ್ಥಾನ ಆಗಿತ್ತು. ಸರ್ದುಲ್‍ಗಡ್ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ. == ಬರೇಟ ನಗರ == ಆರಂಭದಲ್ಲಿ ಅಗ್ಗರ್‌ವಾಲ್ ಪಂಗಡದವರು ಮತ್ತು ರಜಪೂತರು ಸ್ಥಾಪಿಸಿದ ಒಂದು ಹಳ್ಳಿ. ಇಲ್ಲಿ ಆಶಾ ರಾಮ್ ಚೌಧುರಿ ಅವರು ವಾಸವಾಗಿದ್ದ ಮನೆಯು ಈಗ ಆಶಾ ರಾಮ್ ಧರ್ಮಶಾಲೆ ಆಗಿದೆ. ಅವರು ಸ್ಥಾಪಿಸಿದ ಜಂತಾ ದುಖ್ ದಮನ್ ಫಾರ್ಮಸಿ ಸಹ ಇಲ್ಲಿದೆ. ಈ ಸ್ತಬ್ಧ ಮತ್ತು ಶಾಂತಿಯುತ ನಗರವು 15,000 ಕ್ಕಿಂತಲೂ ಸಣ್ಣ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಬುಧ್ಲದಾ ರಸ್ತೆಯಲ್ಲಿರುವ ಮಿಲ್ಕಾ ಸಿಂಗ್ ಶೈಕ್ಷಣಿಕ ಸಂಸ್ಥೆ. ಈ ಸಂಸ್ಥೆಯು ಎಂಜಿನಿಯರಿಂಗ್, ಐಟಿ, ಬ್ಯಾಂಕಿಂಗ್ ಮತ್ತು ಫಾರ್ಮಸಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಒದಗಿಸುತ್ತದೆ. == ಭಿಕಿ == ಭಿಕಿ, ಮಾನಸ ಜಿಲ್ಲೆಯಲ್ಲಿರುವ ಒಂದು ನಗರ ಪಂಚಾಯತಿ. ಇಲ್ಲಿ ಗುರು ತೇಜ್ ಬಹಾದೂರ್ ಸಾಹಿಬ್ ಜಿ ಅವರು ಭೇಟಿನೀಡಿದ ಸ್ಮರಣಾರ್ಥವಾಗಿ ಗುರುದ್ವಾರ ಶ್ರೀ ಪಟ್ಶಾಹಿ ನೌವಿನ್ ಸಾಹಿಬ್ ಸ್ಥಾಪಿಸಲಾಗಿದೆ. ಅನೇಕ ಸಿಖ್ ಮತ್ತು ಹಿಂದೂಗಳು ಇಲ್ಲಿ ಭೇಟಿ ನೀಡಿ, ಗೌರವ ಸಲ್ಲಿಸುತ್ತಾರೆ. ಸಮಾಜದ ಏಳಿಗೆಯ ದೃಷ್ಟಿಯಿಂದ ಅನೇಕ ಶಾಲೆಗಳು ಮತ್ತು ಕಾಲೇಜುಗಳು ಇಲ್ಲಿ ಸ್ಥಾಪಿತವಾಗಿವೆ. == ಉಲ್ಲೇಖಗಳು ==